Big Boss kannada 11 (BBK11) : ಬಿಗ್ ಬಾಸ್ ಸೀಸನ್ 11ರ ಕಪ್ ಗೆಲ್ಲೋದು ಯಾರು? ಹೊಸ ಡೆಡ್‌ಲೈನ್ ಫಿಕ್ಸ್‌!

 Big Boss kannada 11 (BBK11) : ಬಿಗ್ ಬಾಸ್ ಸೀಸನ್ 11ರ ಕಪ್ ಗೆಲ್ಲೋದು ಯಾರು? ಹೊಸ ಡೆಡ್‌ಲೈನ್ ಫಿಕ್ಸ್‌!







  1. ಬಿಗ್‌ ಬಾಸ್ ಸೀಸನ್ 11ರ ಟ್ರೋಫಿ ಯಾರ ಮನೆಗೆ ಹೋಗುತ್ತೆ?
  2. 6 ಜನ ಸ್ಪರ್ಧಿಗಳಲ್ಲಿ ಒಬ್ಬರಿಗೆ ಸೀಸನ್ 11ರ ಟ್ರೋಫಿ, 50ರೂ ಲಕ್ಷ ಬಹುಮಾನ
  3. ಫಿನಾಲೆ ವಾರದಲ್ಲಿ ಯಾರನ್ನು ಬಿಗ್ ಬಾಸ್‌ ವೀಕ್ಷಕರು ಗೆಲ್ಲಿಸುತ್ತಾರೆ?
  4. ನಿಮ್ಮ ವಿನ್ನರ್ ಯಾರು ಎಂದು ಕಮೆಂಟ್ ಮಾಡಿ ? 




ಬಿಗ್ ಬಾಸ್ ಸೀಸನ್ 11ರ ಅಂತಿಮ ಘಟ್ಟ ತಲುಪಿದ್ದು, ಇನ್ನೆರಡು ದಿನಗಳು ಕಳೆದರೆ ಸಾಕು ಯಾರ ಕೈಗೆ ಟ್ರೋಫಿ ಅನ್ನೋದು ಗೊತ್ತಾಗಲಿದೆ. ಒಂದೇ ಒಂದು ಟ್ರೋಫಿಗೆ 12 ಕೈಗಳು, 6 ಸ್ಪರ್ಧಿಗಳು ಕಾತರದಿಂದ ಕಾಯುತ್ತಿದ್ದಾರೆ. ಕೋಟ್ಯಾಂತರ ಕನ್ನಡಿಗರು ಬಿಗ್‌ ಬಾಸ್ ಸೀಸನ್ 11 ಟ್ರೋಫಿ ಯಾರ ಮನೆಗೆ ಹೋಗುತ್ತೆ ಅಂತ ಎದುರು ನೋಡುತ್ತಿದ್ದಾರೆ.
ಬಿಗ್ ಬಾಸ್ ಫಿನಾಲೆಗೆ ವೇದಿಕೆ ರೆಡಿಯಾಗಿದ್ದು ಇದೇ ಶನಿವಾರ ಹಾಗೂ ಭಾನುವಾರ ಸೀಸನ್ 11ರ ಫಿನಾಲೆ ನಡೆಯುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಉಳಿದ 6 ಸ್ಪರ್ಧಿಗಳಲ್ಲಿ ಒಬ್ಬರಿಗೆ ಸೀಸನ್ 11ರ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ಬಹುಮಾನ ಸಿಗುತ್ತಿದೆ.


ಕೊನೆ ಹಂತದಲ್ಲಿ ಬಿಗ್ ಬಾಸ್ ಸ್ಪರ್ಧಿಗಳ ಕೋರಿಕೆಯನ್ನು ಬಿಗ್ ಬಾಸ್ ಈಡೇರಿಸಿದ್ದಾರೆ. ನಿನ್ನೆಯ ಎಪಿಸೋಡ್‌ನಲ್ಲಿ ಮೋಕ್ಷಿತಾ ಸಹೋದರ, ಸಹೋದರಿ ಹಾಗೂ ಭವ್ಯಾ ಅವರ ತಂದೆ ಬಿಗ್ ಬಾಸ್ ಮನೆಗೆ ಬಂದು ಖುಷಿ ಪಡಿಸಿದ್ದಾರೆ. ಈ ಮೂಲಕ ಸ್ಪರ್ಧಿಗಳ ಆಸೆಯನ್ನು ಬಿಗ್ ಬಾಸ್ ಈಡೇರಿಸುವ ಪ್ರಯತ್ನ ಮಾಡಿದ್ದಾರೆ.



ಬಿಗ್ ಬಾಸ್ ಸ್ಪರ್ಧಿಗಳ ಆಸೆ ಈಡೇರಿದೆ. ಇನ್ನು ಈಗ ಕಪ್ ಗೆಲ್ಲೋದು ಯಾರು ಅನ್ನೋ ಫೈನಲ್ ರಿಸಲ್ಟ್ ಅಷ್ಟೇ ಬಾಕಿ ಉಳಿದಿದೆ. ಬಿಗ್‌ಬಾಸ್ ಸೀಸನ್ 11ರ ಫಿನಾಲೆಗೆ ತ್ರಿವಿಕ್ರಮ್, ಮಂಜು, ಮೋಕ್ಷಿತಾ, ರಜತ್, ಹನುಮಂತ, ಭವ್ಯಾ ತಲುಪಿದ್ದಾರೆ. ಫಿನಾಲೆ ವಾರದಲ್ಲಿ ಯಾರನ್ನು ವೀಕ್ಷಕರು ಗೆಲ್ಲಿಸುತ್ತಾರೆ ಅನ್ನೋದಕ್ಕೆ ಈಗ ಹೊಸ ಡೆಡ್‌ಲೈನ್ ಫಿಕ್ಸ್‌ ಆಗಿದೆ.





ಬಿಗ್ ಬಾಸ್ ಶೋ ನೋಡುತ್ತಿರುವ ವೀಕ್ಷಕರು ಈ 6 ಸ್ಪರ್ಧಿಗಳಲ್ಲಿ ಯಾರು ಗೆಲ್ಲಬೇಕು ಅನ್ನೋದನ್ನ ವೋಟ್ ಮಾಡಬಹುದಾಗಿದೆ. ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಗೆಲ್ಲಿಸಲು ವೋಟಿಂಗ್ ಲೈನ್ಸ್ ಇದೇ ಶನಿವಾರ ಬೆಳಗ್ಗೆ 11ರವರೆಗೆ ಮಾತ್ರ ತೆರೆದಿರುತ್ತದೆ. ಶನಿವಾರ ಬೆಳಗ್ಗೆ 11ರ ಒಳಗೆ ಜಿಯೋ ಸಿನಿಮಾ ಆ್ಯಪ್ ಡೌನ್‌ಲೋಡ್ ಮಾಡಿ, ವೋಟ್ ಮಾಡಲು ಅವಕಾಶ ನೀಡಿದ್ದು, ಭಾನುವಾರ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರು ಅನ್ನೋದನ್ನ ಘೋಷಣೆ ಮಾಡಲಾಗುತ್ತಿದೆ.

Comments

Popular posts from this blog

🎮 BGMI 60 FPS Config: Unlock Smooth Gameplay on Any Device!

BGMI 4.1 update new config file download direct link mediafire link

BGMI new config file download direct link mediafire link